Sunday, April 13, 2008
ಎಲ್ಲಾ ಮಾಯಾ ಇಲ್ಲಿ ಎಲ್ಲಾ ಮಾಯ
ಮೊನ್ನೆ ಬೆಂಗಳೂರಿನ ಓಲ್ಲೋ ಬಸ್ಸಿನಲ್ಲಿ ಸಂಚರಿಸುತ್ತಿದ್ದಾಗ ಸಹಪ್ರಯಾಣಿಕರೊಬ್ಬರು ಟಿ.ವಿ.ಯನ್ನು ಹಾಕುವಂತೆ ನಿರ್ವಾಹಕರಲ್ಲಿ ಕೇಳಿಕೊಂಡರು. ನಿರ್ವಾಹಕ ಟಿ.ವಿ ಇಲ್ಲ ಎಂದು ಉತ್ತರ ನೀಡಿದ. ಗಮನಿಸಿದಾಗ ಟಿ.ವಿ ಇರಬೇಕಾದ ಡಬ್ಬಿಗಳು ಖಾಲಿ! ಬಹುಶ್ಯಃ ಆ ಟಿ.ವಿ.ಗಳು ಅಧಿಕಾರಿಗಳ ಮನೆ ಬಂಗಲೆಗಳನ್ನು ಸೇರಿಯಾಗಿರಬೇಕು. ನನ್ನ ಹಿಂದಿನ ಬ್ಲಾಗ್ ನಲ್ಲಿ ಅತ್ಯಾಧುನಿಕ ಜಿ.ಪಿ.ಎಸ್ ಟಿವಿಯ ಬಗ್ಗೆ ಬರೆದಿದ್ದೆ. ಈಗ ಇವೆಲ್ಲ ಮಟಾ ಮಾಯವಾಗಿವೆ. ಒಂದೊಂದು ಬಸ್ಸಿನಲ್ಲಿ ಎರಡೆರಡು ಟಿವಿಗಳನ್ನು ಮೊದಮೊದಲು ಒದಗಿಸಿದ್ದರು. ಇವುಗಳು ಎಲ್ಲಿ ಹೋದವು ಎಂದು ವಿಚಾರಣೆ ನಡೆಸುವುದು ಅಗತ್ಯವಾಗಿದೆ.
ನಮ್ಮ ಚಲನಚಿತ್ರ ರಂಗದಿಂದ ನಮ್ಮ ಭಾಷೆಯ ಕೊಲೆ
ನನ್ನ ಗೆಳೆಯನೊಬ್ಬ ಇತ್ತೀಚೆಗೆ ಸಾಯ್ಲೋ, ಸಾಯ್ಲೋ ಎಂಬ ಹಾಡೊಂದನ್ನು ಗುನುಗುತ್ತಿದ್ದ. ಅವನಿಗೆ ಆ ಪದಗಳು ಸ್ಟೈಲೋ ಸ್ಟೈಲೋ ಎಂದು ಎಂದು ತಿಳಿಸಬೇಕಾಯಿತು. ಅವನ ತಪ್ಪೇನು ಇರಲಿಲ್ಲ. ಅವನಿಗೆ ಪಾಪ ಇಂಗ್ಲೀಷ್ ಬರುತ್ತಿರಲಿಲ್ಲ. ನಮಗೆ ಗೊತ್ತಿರದ ಪದಗಳನ್ನು ನಮ್ಮ ಮೆದುಳು ಅದಕ್ಕೆ ಗೊತ್ತಿರುವ ಪದಕ್ಕೆ ಹೊಂದಿಸಲು ಪ್ರಯತ್ನಿಸುತ್ತದೆ. ಅಷ್ಟಕ್ಕೂ ಈ ಪದಗಳು ಇಂಗ್ಲೀಷ್ ಶಬ್ದಕೋಷದಲ್ಲಿ ಇಲ್ಲ! ಇದು ನಮ್ಮ ಚಲನಚಿತ್ರ ರಂಗ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳನ್ನು ಕೆಡಿಸುತ್ತಿರುವ ರೀತಿ. ಕನ್ನಡ ನಾಡಿನ ಜನರು ಇಂಗ್ಲೀಷನ್ನು ಕಡ್ಡಾಯವಾಗಿ ಕಲಿತಿರುತ್ತಾರೆ ಎಂದು ನಂಬಿದೆ ನಮ್ಮ ಚಿತ್ರರಂಗ. ಕನ್ನಡ ಚಿತ್ರಗಳಿಗೆ ಕನ್ನಡದ ಹೆಸರು ಇಡುವುದು ಇವರಿಗೆ ಮುಜುಗರ ತರುವ ಸಂಗತಿ. ಇಂಗ್ಲೀಷ್ ಪದಗಳನ್ನ್ ಬಳಸುವುದು ಹಾಗಿರಲಿ, ಮಲಯಾಳಂ, ತೆಲುಗು ಹಾಡುಗಳನ್ನು ಪೂರ್ಣ ಪ್ರಮಾಣದಲ್ಲಿ ಕನ್ನಡ ಚಿತ್ರಗಳಲ್ಲಿ ಅನಗತ್ಯವಾಗಿ ಕಾಣಬಹುದು. ರಾ ರಾ ಮತ್ತು ಕುಟ್ಟಿ ಕುಟ್ಟಿ ಹಾಡುಗಳನ್ನೇ ಗಮನಿಸಿ. ಸರ್ಕಾರ ಈ ಬೆಳವಣಿಗೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಅರಣ್ಯದ ರೈಲು ಮಾರ್ಗ
ಹುಬ್ಬಳ್ಳಿ - ಅಂಕೋಲಾ ಪರಿಷ್ಕೃತ ರೈಲು ಮಾರ್ಗ ಯೋಜನೆಯಿಂದ 2 ಲಕ್ಷದ 65 ಸಾವಿರದ ನೂರಾ ಇಪ್ಪತ್ತು ಮರಗಳನ್ನು ಕಡಿಯಬೇಕಾಗಿ ಬಂದಿದೆ. ಇದು ಟೈಮ್ಸ್ ಆಫ್ ಇಂಡಿಯಾದ ವರದಿಯನ್ನು ಆದರಿಸಿದೆ. ಬೆಂಗಳೂರು ಮೆಟ್ರೋ ಯೋಜನೆಗಾಗಿ ಕೆಲವು ನೂರು ಮರಗಳನ್ನು ಕಡಿಯಬೇಕಾಗಿ ಬಂದಾಗ ಹುಯಿಲೆಬ್ಬಿಸಿದ ಪರಿಸರವಾದಿಗಳು ಈಗ ಏನು ಮಾಡುತ್ತಾರೋ ನೋಡಬೇಕು.
ಪರಿಸರವಾದ ಜನೋಪಯೋಗಿ ಕಾರ್ಯಕ್ರಮಗಳನ್ನು ತೋರುಗಾಣಿಕೆಗೆ ವಿರೋಧಿಸುವುದಲ್ಲ. ಬೃಹತ್ ಜಲವಿದ್ಯುತ್ ಯೋಜನೆಗಳಾದ ಶರಾವತಿ, ವಾರಾಹಿ ಮುಂತಾದ ಅಣೇಕಟ್ಟುಗಳನ್ನು ಕಟ್ಟುವಾಗ ನಾವು ಕಳೆದುಕೊಂಡ ಮರಗಳ ಸಂಖ್ಯೆ ಹಲವು ಕೋಟಿ. ಪರಿಸರವಾದಿಗಳ ಯೋಚನೆ ಕಳೆದುಕೊಂಡ ಕಾಡನ್ನು ಬೇರೆಲ್ಲಿ ಬೆಳೆಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕಿತ್ತು. ಪ್ರಗತಿಯ ಜೊತೆ ಪ್ರಕೃತಿಯ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಅವರು ಯೋಚಿಸಿ,ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕರ್ನಾಟಕ ಅರಣ್ಯ ಇಲಾಖೆಯೂ ಈ ನಿಟ್ಟಿನಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿದೆ.

Subscribe to:
Posts (Atom)