Sunday, October 26, 2008
ಸಂಗೀತ ಕಾರಂಜಿ
ಬೆಂಗಳೂರಿನ ಹನುಮಂತ ನಗರದಲ್ಲಿರುವ ಸಂಗೀತ ಕಾರಂಜಿಗೆ ಬಹಳ ದಿನಗಳ ನಂತರ ಇಂದು ಭೇಟಿ ಕೊಟ್ಟೆ. ಅಂದಿನ ದಿನಗಳಲ್ಲಿ ಒಂದೆರಡು ಹಿಂದೀ ಹಾಡುಗಳು, ಒಂದೆರಡು ಕನ್ನಡ ಹಾಡುಗಳನ್ನು ಅಳವಡಿಸಿರುತ್ತಿದ್ದರು. ಇಂದು ಎಲ್ಲ ಹಾಡುಗಳನ್ನೂ ಕನ್ನಡದಿಂದ ಆಯ್ಕೆಮಾಡಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ಗಮನಸೆಳೆದ ಹಾಡು "ಸ್ವಾಭಿಮಾನದ ನಲ್ಲೆ...". ಇದನ್ನು ಸಂಗೀತ ಕಾರಂಜಿಗೆ ಉತ್ತಮವಾಗಿ ಅಳವಡಿಸಿದ್ದಾರೆ. ಹಾಡನ್ನು ಉತ್ತಮವಾಗಿ ವಾದ್ಯಸಂಗೀತಕ್ಕೆ ಪರಿವರ್ತಿಸಿದ್ದು ಕಾರಂಜಿಗಳು ಉತ್ತಮ ಸಹಕಾರದೊಂದಿಗೆ ನರ್ತಿಸಿದವು. ಹಾಡನ್ನು ಕಾರಂಜಿಗೆ ಅಳವಡಿಸಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.
Sunday, April 13, 2008
ಎಲ್ಲಾ ಮಾಯಾ ಇಲ್ಲಿ ಎಲ್ಲಾ ಮಾಯ
ಮೊನ್ನೆ ಬೆಂಗಳೂರಿನ ಓಲ್ಲೋ ಬಸ್ಸಿನಲ್ಲಿ ಸಂಚರಿಸುತ್ತಿದ್ದಾಗ ಸಹಪ್ರಯಾಣಿಕರೊಬ್ಬರು ಟಿ.ವಿ.ಯನ್ನು ಹಾಕುವಂತೆ ನಿರ್ವಾಹಕರಲ್ಲಿ ಕೇಳಿಕೊಂಡರು. ನಿರ್ವಾಹಕ ಟಿ.ವಿ ಇಲ್ಲ ಎಂದು ಉತ್ತರ ನೀಡಿದ. ಗಮನಿಸಿದಾಗ ಟಿ.ವಿ ಇರಬೇಕಾದ ಡಬ್ಬಿಗಳು ಖಾಲಿ! ಬಹುಶ್ಯಃ ಆ ಟಿ.ವಿ.ಗಳು ಅಧಿಕಾರಿಗಳ ಮನೆ ಬಂಗಲೆಗಳನ್ನು ಸೇರಿಯಾಗಿರಬೇಕು. ನನ್ನ ಹಿಂದಿನ ಬ್ಲಾಗ್ ನಲ್ಲಿ ಅತ್ಯಾಧುನಿಕ ಜಿ.ಪಿ.ಎಸ್ ಟಿವಿಯ ಬಗ್ಗೆ ಬರೆದಿದ್ದೆ. ಈಗ ಇವೆಲ್ಲ ಮಟಾ ಮಾಯವಾಗಿವೆ. ಒಂದೊಂದು ಬಸ್ಸಿನಲ್ಲಿ ಎರಡೆರಡು ಟಿವಿಗಳನ್ನು ಮೊದಮೊದಲು ಒದಗಿಸಿದ್ದರು. ಇವುಗಳು ಎಲ್ಲಿ ಹೋದವು ಎಂದು ವಿಚಾರಣೆ ನಡೆಸುವುದು ಅಗತ್ಯವಾಗಿದೆ.
ನಮ್ಮ ಚಲನಚಿತ್ರ ರಂಗದಿಂದ ನಮ್ಮ ಭಾಷೆಯ ಕೊಲೆ
ನನ್ನ ಗೆಳೆಯನೊಬ್ಬ ಇತ್ತೀಚೆಗೆ ಸಾಯ್ಲೋ, ಸಾಯ್ಲೋ ಎಂಬ ಹಾಡೊಂದನ್ನು ಗುನುಗುತ್ತಿದ್ದ. ಅವನಿಗೆ ಆ ಪದಗಳು ಸ್ಟೈಲೋ ಸ್ಟೈಲೋ ಎಂದು ಎಂದು ತಿಳಿಸಬೇಕಾಯಿತು. ಅವನ ತಪ್ಪೇನು ಇರಲಿಲ್ಲ. ಅವನಿಗೆ ಪಾಪ ಇಂಗ್ಲೀಷ್ ಬರುತ್ತಿರಲಿಲ್ಲ. ನಮಗೆ ಗೊತ್ತಿರದ ಪದಗಳನ್ನು ನಮ್ಮ ಮೆದುಳು ಅದಕ್ಕೆ ಗೊತ್ತಿರುವ ಪದಕ್ಕೆ ಹೊಂದಿಸಲು ಪ್ರಯತ್ನಿಸುತ್ತದೆ. ಅಷ್ಟಕ್ಕೂ ಈ ಪದಗಳು ಇಂಗ್ಲೀಷ್ ಶಬ್ದಕೋಷದಲ್ಲಿ ಇಲ್ಲ! ಇದು ನಮ್ಮ ಚಲನಚಿತ್ರ ರಂಗ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳನ್ನು ಕೆಡಿಸುತ್ತಿರುವ ರೀತಿ. ಕನ್ನಡ ನಾಡಿನ ಜನರು ಇಂಗ್ಲೀಷನ್ನು ಕಡ್ಡಾಯವಾಗಿ ಕಲಿತಿರುತ್ತಾರೆ ಎಂದು ನಂಬಿದೆ ನಮ್ಮ ಚಿತ್ರರಂಗ. ಕನ್ನಡ ಚಿತ್ರಗಳಿಗೆ ಕನ್ನಡದ ಹೆಸರು ಇಡುವುದು ಇವರಿಗೆ ಮುಜುಗರ ತರುವ ಸಂಗತಿ. ಇಂಗ್ಲೀಷ್ ಪದಗಳನ್ನ್ ಬಳಸುವುದು ಹಾಗಿರಲಿ, ಮಲಯಾಳಂ, ತೆಲುಗು ಹಾಡುಗಳನ್ನು ಪೂರ್ಣ ಪ್ರಮಾಣದಲ್ಲಿ ಕನ್ನಡ ಚಿತ್ರಗಳಲ್ಲಿ ಅನಗತ್ಯವಾಗಿ ಕಾಣಬಹುದು. ರಾ ರಾ ಮತ್ತು ಕುಟ್ಟಿ ಕುಟ್ಟಿ ಹಾಡುಗಳನ್ನೇ ಗಮನಿಸಿ. ಸರ್ಕಾರ ಈ ಬೆಳವಣಿಗೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಅರಣ್ಯದ ರೈಲು ಮಾರ್ಗ
ಹುಬ್ಬಳ್ಳಿ - ಅಂಕೋಲಾ ಪರಿಷ್ಕೃತ ರೈಲು ಮಾರ್ಗ ಯೋಜನೆಯಿಂದ 2 ಲಕ್ಷದ 65 ಸಾವಿರದ ನೂರಾ ಇಪ್ಪತ್ತು ಮರಗಳನ್ನು ಕಡಿಯಬೇಕಾಗಿ ಬಂದಿದೆ. ಇದು ಟೈಮ್ಸ್ ಆಫ್ ಇಂಡಿಯಾದ ವರದಿಯನ್ನು ಆದರಿಸಿದೆ. ಬೆಂಗಳೂರು ಮೆಟ್ರೋ ಯೋಜನೆಗಾಗಿ ಕೆಲವು ನೂರು ಮರಗಳನ್ನು ಕಡಿಯಬೇಕಾಗಿ ಬಂದಾಗ ಹುಯಿಲೆಬ್ಬಿಸಿದ ಪರಿಸರವಾದಿಗಳು ಈಗ ಏನು ಮಾಡುತ್ತಾರೋ ನೋಡಬೇಕು.
ಪರಿಸರವಾದ ಜನೋಪಯೋಗಿ ಕಾರ್ಯಕ್ರಮಗಳನ್ನು ತೋರುಗಾಣಿಕೆಗೆ ವಿರೋಧಿಸುವುದಲ್ಲ. ಬೃಹತ್ ಜಲವಿದ್ಯುತ್ ಯೋಜನೆಗಳಾದ ಶರಾವತಿ, ವಾರಾಹಿ ಮುಂತಾದ ಅಣೇಕಟ್ಟುಗಳನ್ನು ಕಟ್ಟುವಾಗ ನಾವು ಕಳೆದುಕೊಂಡ ಮರಗಳ ಸಂಖ್ಯೆ ಹಲವು ಕೋಟಿ. ಪರಿಸರವಾದಿಗಳ ಯೋಚನೆ ಕಳೆದುಕೊಂಡ ಕಾಡನ್ನು ಬೇರೆಲ್ಲಿ ಬೆಳೆಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕಿತ್ತು. ಪ್ರಗತಿಯ ಜೊತೆ ಪ್ರಕೃತಿಯ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಅವರು ಯೋಚಿಸಿ,ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕರ್ನಾಟಕ ಅರಣ್ಯ ಇಲಾಖೆಯೂ ಈ ನಿಟ್ಟಿನಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿದೆ.
ಪರಿಸರವಾದ ಜನೋಪಯೋಗಿ ಕಾರ್ಯಕ್ರಮಗಳನ್ನು ತೋರುಗಾಣಿಕೆಗೆ ವಿರೋಧಿಸುವುದಲ್ಲ. ಬೃಹತ್ ಜಲವಿದ್ಯುತ್ ಯೋಜನೆಗಳಾದ ಶರಾವತಿ, ವಾರಾಹಿ ಮುಂತಾದ ಅಣೇಕಟ್ಟುಗಳನ್ನು ಕಟ್ಟುವಾಗ ನಾವು ಕಳೆದುಕೊಂಡ ಮರಗಳ ಸಂಖ್ಯೆ ಹಲವು ಕೋಟಿ. ಪರಿಸರವಾದಿಗಳ ಯೋಚನೆ ಕಳೆದುಕೊಂಡ ಕಾಡನ್ನು ಬೇರೆಲ್ಲಿ ಬೆಳೆಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕಿತ್ತು. ಪ್ರಗತಿಯ ಜೊತೆ ಪ್ರಕೃತಿಯ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಅವರು ಯೋಚಿಸಿ,ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕರ್ನಾಟಕ ಅರಣ್ಯ ಇಲಾಖೆಯೂ ಈ ನಿಟ್ಟಿನಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿದೆ.
Monday, February 25, 2008
ಉಚಿತ ಅಂತರ್ಜಾಲ ಸೇವೆಗಳು
ನನ್ನ ಎರಡು ಅಂತರ್ಜಾಲ ಪ್ರಯೋಗಗಳು http://searchkannada.co.nr ಮತ್ತು http://ananth.c-o.in. ಇವುಗಳು ಉಚಿತ ಸೇವೆಗಳ ಮೇಲೆ ಅವಲಂಬಿತವಾಗಿವೆ. ಇವುಗಳಲ್ಲಿ ಉಚಿತ ವಿಳಾಸವನ್ನು ಒದಗಿಸುವ http://c-o.in ವರ್ಷದಲ್ಲಿ ಹಲವಾರು ಬಾರಿ ಸ್ತಬ್ಡಗೊಂಡಿತ್ತು. ಅಪರೂಪಕ್ಕೊಮ್ಮೆ http://co.nr ಕೂಡ ಸ್ತಬ್ಡಗೊಂಡಿತ್ತು. ಆದರೆ ಉತ್ತಮ ಸೇವೆ ಒದಗಿಸುತ್ತಿರುವ ಸಂಸ್ಥೆಗಳೆಂದರೆ ಗೂಗಲ್ ಕ್ರಮಬದ್ಧ ಶೋಧನೆ(http://www.google.com/coop/cse/), http://110mb.com ಮತ್ತು ಉಚಿತ MySQL ಸೇವೆಯನ್ನು ಒದಗಿಸುತ್ತಿರುವ http://php0h.com. ಒಮ್ಮೆ php0hನವರು ಹಲವಾರು ಸರ್ವರ್ ಗಳನ್ನು ಸೇರಿಸಿದರು. ಆಗ MySQL ವಿಳಾಸವನ್ನು ಬದಲಾಯಿಸಿಕೊಳ್ಳುವಂತೆ ಇಮೈಲ್ ಕಳುಹಿಸಿದ್ದರು. ಇಮೈಲನ್ನು ತಕ್ಷಣ ಗಮನಿಸದಿದ್ದರಿಂದ http://ananth.c-o.in ಸ್ಥಗಿತಗೊಂಡಿತು.
ಒಟ್ಟಿನಲ್ಲಿ ಒಂದು ಅಂತರ್ಜಾಲ ತಾಣವನ್ನು ನಡೆಸಲು ಸಮಯವನ್ನು ಮೀಸಲಿಡುವುದು ಮುಖ್ಯ. ಉಚಿತ ಸೇವೆಗಳನ್ನು ಪಡೆದುಕೊಳ್ಳುವುದಕ್ಕಿಂತ ಹಣ ಪಾವತಿಸಿ ಸೇವೆಗಳನ್ನು ಕೊಳ್ಳುವುದೇ ಉತ್ತಮ. ಇತ್ತೀಚೆಗೆ ಭಾರತದಲ್ಲಿ ಅಂತರ್ಜಾಲ ತಾಣವನ್ನು ಕೋಳ್ಳಲು ಬಹಳ ಹಣ ಖರ್ಚುಮಾಡಬೇಕಿಲ್ಲ.
ಒಟ್ಟಿನಲ್ಲಿ ಒಂದು ಅಂತರ್ಜಾಲ ತಾಣವನ್ನು ನಡೆಸಲು ಸಮಯವನ್ನು ಮೀಸಲಿಡುವುದು ಮುಖ್ಯ. ಉಚಿತ ಸೇವೆಗಳನ್ನು ಪಡೆದುಕೊಳ್ಳುವುದಕ್ಕಿಂತ ಹಣ ಪಾವತಿಸಿ ಸೇವೆಗಳನ್ನು ಕೊಳ್ಳುವುದೇ ಉತ್ತಮ. ಇತ್ತೀಚೆಗೆ ಭಾರತದಲ್ಲಿ ಅಂತರ್ಜಾಲ ತಾಣವನ್ನು ಕೋಳ್ಳಲು ಬಹಳ ಹಣ ಖರ್ಚುಮಾಡಬೇಕಿಲ್ಲ.
Friday, February 8, 2008
ಕನ್ನಡದ ಅಂತರ್ಜಾಲ ತಾಣಗಳು
ಕನ್ನಡದಲ್ಲಿ ಅಂತರ್ಜಾಲ ತಾಣಗಳು ಬೆಳೆಯುತ್ತಿವೆ. ಪ್ರತಿ ತಿಂಗಳು ಒಂದು ಎರಡು ಹೊಸ ತಾಣಗಳು ಸೇರ್ಪದೆಯಾಗುತ್ತಿವೆ. ಈ ಉದ್ದೇಶಕ್ಕಾಗಿ ನಾನು ತಯಾರಿಸಿದ ಪುಟ http://ananth.c-o.in. ಈ ಪುಟದಲ್ಲಿ ಹೊಸ ತಾಣವನ್ನು ಯಾರು ಬೇಕಾದರೂ ಸೇರಿಸಬಹುದು.
Tuesday, October 2, 2007
ನಕಲಿ ಪರಿಸರವಾದ
ಇತ್ತೀಚೆಗೆ ಮೆಟ್ರೊ ರೈಲು ಕಾಮಗಾರಿಗಾಗಿ ಮರಗಳನ್ನು ಕಡಿಯಬೇಕಾಗಿ ಬಂದಾಗ ಪರಿಸರವಾದಿಗಳು ಅದನ್ನು ವಿರೋಧಿಸಿದ್ದನ್ನು ಗಮನಿಸಿದೆ. ಒಂದು ರೈಲು ಬಂಡಿ ಓಡಿದಾಗ ಅದು ಹೊರಸೂಸೂವ ಹೊಗೆ, ಹಾಗೂ ಅದರಲ್ಲಿ ಓಡಾಡುವ 50% ಜನ ತಮ್ಮ ಕಾರು ಅಥವಾ ದ್ವಿಚಕ್ರ ವಾಹನಗಳಲ್ಲಿ ಓಡಾಡಿದರೆ ಅದರಿಂದ ಬರುವ ಒಟ್ಟು ಹೊಗೆ ಇವೆರಡನ್ನು ಹೋಲಿಸಿದರೆ ಖಂಡಿತ ರೈಲು ಬಂಡಿಯ ಹೊಗೆ ಕಡಿಮೆ ಇರುತ್ತದೆ. ಮಾಲಿನ್ಯವನ್ನು ತಗ್ಗಿಸುವುದು ಪರಿಸರಕ್ಕೆ ಅನುಕೂಲಕರವಲ್ಲವೇ? ಈ ಪರಿಸರವಾದಿಗಳು ಸುದ್ದಿ ಮಾಡುವ ಸನ್ನಿವೇಶಗಳಿಗಾಗಿ ಕಾಯುತ್ತಿರುತ್ತಾರೇನೋ ಅನ್ನಿಸುತ್ತದೆ. ಒಂದು ಆಣೇಕಟ್ಟು ಕಟ್ಟಬೇಕು, ಒಂದು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಬೇಕು ಎಂದಾಗ ಪರಿಸರವಾದಿಗಳು ಬೊಬ್ಬೆ ಇಡಲು ಪ್ರಾರಂಭಿಸುತ್ತಾರೆ. ಆದರೆ ಇವರ ಮನೆಗಳಲ್ಲಿ ಜಗಮಗಿಸುತ್ತಿರುವ ವಿದ್ಯುತ್ ರಾಯಚೂರಿನ ಸದಾ ಹೊಗೆ ಉಗುಳುವ ಸ್ತಾವರಗಳಿಂದ, ಸಾವಿರಾರು ಎಕರೆ ಕಾಡನ್ನು ಮುಳುಗಿಸಿ, ನೂರಾರು ಊರುಗಳನ್ನು ಮುಳುಗಿಸಿ ನಿಂತಿರುವ ಆಣೇಕಟ್ಟುಗಳಿಂದ ಎಂಬುದನ್ನು ಮರೆಯುತ್ತಾರೆ. ದೇಶದಲ್ಲಿ ಅದೆಷ್ಟು ಮಂದಿ ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದಾರೆ ಎಂಬ ಕಲ್ಪನೆ ಇವರಿಗೆ ಇದ್ದಂತಿಲ್ಲ.
- ನಿಜವಾದ ಪರಿಸರವಾದಿಗಳು ಮಲೆನಾಡಿನ ದಟ್ಟ ಅರಣ್ಯಗಳಲ್ಲಿ ಬೆಳೆಯುವ ಅಮೂಲ್ಯ ಜಾತಿಯ ಮರಗಳನ್ನು ಬಯಲು ಪ್ರದೇಶಗಳಲ್ಲಿ ಹೇಗೆ ಬೆಳೆಸಬಹುದೆಂದು ಚಿಂತನೆ ನೆಡೆಸಬೇಕು
- ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳಿಂದ ಹೊರಸೂಸುವ ವಿಕಿರಣವನ್ನು ಕಡಿಮೆಮಾಡಲು ಏನು ಮಾಡಬೇಕೆಂದು ಅಧ್ಯಯನ ಮಾಡಬೇಕು
- ಅಗತ್ಯವಿದ್ದಾಗ ಮಾತ್ರ ತಮ್ಮ ವಾಹನಗಳನ್ನು ಬಳಸಬೇಕು.
- ಮೆಟ್ರೋ ರೈಲು, ವಿದ್ಯುತ್ ಸ್ಥಾವರಗಳು ಇಂದಿನ ದಿನದ ಅನಿವಾರ್ಯತೆ ಎಂದು ಅರ್ಥ ಮಾಡಿಕೊಳ್ಳಬೇಕು.
- ಒಂದು ಉದಾಹರಣೆಗೆ ವಾರಾಹಿ ಜಲವಿದ್ಯುತ್ ಯೋಜನೆಗಾಗಿ ಮರಗಳನ್ನು ಕಡಿಯಲು ನೂರಾರು ಲಾರಿಗಳು, ನೂರಾರು ಆನೆಗಳು ತಿಂಗಳುಗಟ್ಟಲೆ ಕೆಲಸ ಮಾಡಿದವು. ಸಾವಿರಾರು ಎಕರೆ ಜಾಗದಿಂದ ಲಕ್ಷಾಂತರ ಮರಗಳನ್ನು ಕಡಿಯಲಾಯಿತು. ಇಂದು ನಾವು ಅನುಭವಿಸುತ್ತಿರುವ ವಿದ್ಯುತ್ತಿನಲ್ಲಿ ಒಂದು ಪಾಲು ವಾರಾಹಿಯಿಂದಲೂ ಬರುತ್ತಿದೆ. ನಾನು ಇದಕ್ಕಾಗಿ ಎಷ್ಟು ಗಿಡಗಳನ್ನು ನೆಟ್ಟು ಪೋಷಿಸಿದ್ದೇನೆ ಎಂದು ಪ್ರತಿಯೊಬ್ಬ ಪರಿಸರವಾದಿಯೂ ಪ್ರಶ್ನೆ ಮಾಡಿಕೊಳ್ಳಬೇಕು
- ಪರಿಸರವಾದಿಗಳು ಸಾಮಾನ್ಯ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು
Subscribe to:
Posts (Atom)