Sunday, April 13, 2008

ಅರಣ್ಯದ ರೈಲು ಮಾರ್ಗ

ಹುಬ್ಬಳ್ಳಿ - ಅಂಕೋಲಾ ಪರಿಷ್ಕೃತ ರೈಲು ಮಾರ್ಗ ಯೋಜನೆಯಿಂದ 2 ಲಕ್ಷದ 65 ಸಾವಿರದ ನೂರಾ ಇಪ್ಪತ್ತು ಮರಗಳನ್ನು ಕಡಿಯಬೇಕಾಗಿ ಬಂದಿದೆ. ಇದು ಟೈಮ್ಸ್ ಆಫ್ ಇಂಡಿಯಾದ ವರದಿಯನ್ನು ಆದರಿಸಿದೆ. ಬೆಂಗಳೂರು ಮೆಟ್ರೋ ಯೋಜನೆಗಾಗಿ ಕೆಲವು ನೂರು ಮರಗಳನ್ನು ಕಡಿಯಬೇಕಾಗಿ ಬಂದಾಗ ಹುಯಿಲೆಬ್ಬಿಸಿದ ಪರಿಸರವಾದಿಗಳು ಈಗ ಏನು ಮಾಡುತ್ತಾರೋ ನೋಡಬೇಕು.
ಪರಿಸರವಾದ ಜನೋಪಯೋಗಿ ಕಾರ್ಯಕ್ರಮಗಳನ್ನು ತೋರುಗಾಣಿಕೆಗೆ ವಿರೋಧಿಸುವುದಲ್ಲ. ಬೃಹತ್ ಜಲವಿದ್ಯುತ್ ಯೋಜನೆಗಳಾದ ಶರಾವತಿ, ವಾರಾಹಿ ಮುಂತಾದ ಅಣೇಕಟ್ಟುಗಳನ್ನು ಕಟ್ಟುವಾಗ ನಾವು ಕಳೆದುಕೊಂಡ ಮರಗಳ ಸಂಖ್ಯೆ ಹಲವು ಕೋಟಿ. ಪರಿಸರವಾದಿಗಳ ಯೋಚನೆ ಕಳೆದುಕೊಂಡ ಕಾಡನ್ನು ಬೇರೆಲ್ಲಿ ಬೆಳೆಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕಿತ್ತು. ಪ್ರಗತಿಯ ಜೊತೆ ಪ್ರಕೃತಿಯ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಅವರು ಯೋಚಿಸಿ,ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕರ್ನಾಟಕ ಅರಣ್ಯ ಇಲಾಖೆಯೂ ಈ ನಿಟ್ಟಿನಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿದೆ.

No comments: