Sunday, April 13, 2008
ನಮ್ಮ ಚಲನಚಿತ್ರ ರಂಗದಿಂದ ನಮ್ಮ ಭಾಷೆಯ ಕೊಲೆ
ನನ್ನ ಗೆಳೆಯನೊಬ್ಬ ಇತ್ತೀಚೆಗೆ ಸಾಯ್ಲೋ, ಸಾಯ್ಲೋ ಎಂಬ ಹಾಡೊಂದನ್ನು ಗುನುಗುತ್ತಿದ್ದ. ಅವನಿಗೆ ಆ ಪದಗಳು ಸ್ಟೈಲೋ ಸ್ಟೈಲೋ ಎಂದು ಎಂದು ತಿಳಿಸಬೇಕಾಯಿತು. ಅವನ ತಪ್ಪೇನು ಇರಲಿಲ್ಲ. ಅವನಿಗೆ ಪಾಪ ಇಂಗ್ಲೀಷ್ ಬರುತ್ತಿರಲಿಲ್ಲ. ನಮಗೆ ಗೊತ್ತಿರದ ಪದಗಳನ್ನು ನಮ್ಮ ಮೆದುಳು ಅದಕ್ಕೆ ಗೊತ್ತಿರುವ ಪದಕ್ಕೆ ಹೊಂದಿಸಲು ಪ್ರಯತ್ನಿಸುತ್ತದೆ. ಅಷ್ಟಕ್ಕೂ ಈ ಪದಗಳು ಇಂಗ್ಲೀಷ್ ಶಬ್ದಕೋಷದಲ್ಲಿ ಇಲ್ಲ! ಇದು ನಮ್ಮ ಚಲನಚಿತ್ರ ರಂಗ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳನ್ನು ಕೆಡಿಸುತ್ತಿರುವ ರೀತಿ. ಕನ್ನಡ ನಾಡಿನ ಜನರು ಇಂಗ್ಲೀಷನ್ನು ಕಡ್ಡಾಯವಾಗಿ ಕಲಿತಿರುತ್ತಾರೆ ಎಂದು ನಂಬಿದೆ ನಮ್ಮ ಚಿತ್ರರಂಗ. ಕನ್ನಡ ಚಿತ್ರಗಳಿಗೆ ಕನ್ನಡದ ಹೆಸರು ಇಡುವುದು ಇವರಿಗೆ ಮುಜುಗರ ತರುವ ಸಂಗತಿ. ಇಂಗ್ಲೀಷ್ ಪದಗಳನ್ನ್ ಬಳಸುವುದು ಹಾಗಿರಲಿ, ಮಲಯಾಳಂ, ತೆಲುಗು ಹಾಡುಗಳನ್ನು ಪೂರ್ಣ ಪ್ರಮಾಣದಲ್ಲಿ ಕನ್ನಡ ಚಿತ್ರಗಳಲ್ಲಿ ಅನಗತ್ಯವಾಗಿ ಕಾಣಬಹುದು. ರಾ ರಾ ಮತ್ತು ಕುಟ್ಟಿ ಕುಟ್ಟಿ ಹಾಡುಗಳನ್ನೇ ಗಮನಿಸಿ. ಸರ್ಕಾರ ಈ ಬೆಳವಣಿಗೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
Subscribe to:
Post Comments (Atom)
No comments:
Post a Comment